ಹಿಂದಿನ ದಿನ ನನ್ನ ದೊಡ್ಡಪ್ಪ ತೀರಿಕೊಂಡಿದ್ದರು. ಹೃದಯಾಘಾತದಿಂದ ಮನೆಯಲ್ಲಿಯೇ ಆಯಿತು. ಅವರ ಅಂತಿಮ ದರ್ಶನವನ್ನು ರುದ್ರ ಭೂಮಿಯಲ್ಲಿಯೇ ಮಾಡಬೇಕಾದ ಸಂದರ್ಭ. ನಾನು ನನ್ನ ಮನೆಯವರು ಹೊರೆಟೆವು. ಇದೆ ಮೊದಲು ನಾನು ಇಂತಹ ಸ್ಥಳಕ್ಕೆ ಬಂದದ್ದು. ದೊಡ್ಡಪ್ಪನವರನ್ನು ನೋಡಿ ಸುತ್ತ ನೋಡಿದರೆ ಅಲ್ಲಲ್ಲಿ ಚಿತೆಗಳು ಉರಿಯುತ್ತವೆ. ಅರೆಕ್ಷಣ ಕಂಗಾಲಾದೆ, ನೋಡಲಾಗಲಿಲ್ಲ. ಬಂದು ಸ್ವಲ್ಪ ದೂರದಲ್ಲೇ ಅಮ್ಮ, ಚಿಕ್ಕಮ್ಮನ ಜೊತೆ ಬೆಂಚಿನ ಮೇಲೆ ಕುಳಿತೆ. ಕೊನೆ ಕಾರ್ಯಗಳಿಗೆ ಪುರೋಹಿತರಿಗೆ ಕಾಯಬೇಕಿತ್ತು. ವರ್ಷದ ಹಿಂದೆಯಷ್ಟೇ ದೊಡ್ಡಮ್ಮ ಹೋದದ್ದು, ಆಕೆಯ ವೈಕುಂಠ ಸಮಾರಾಧನೆ ಆಗಿ ಮೂರು ವಾರ ಆಗಿದ್ದಿತ್ತಷ್ಟೆ. ದೊಡ್ಡಪ್ಪನು ಹೊರಟರು ಹಿಂದೆಯೇ, ಯಾರ ಕೈಯ್ಯಲು ಸಿಗದೇ, ಸೇವೆ ಮಾಡಿಸಿಕೊಳ್ಳದೆ.
ಆ ಬೆಂಚಿನ ಮೇಲೆ ಕುಳಿತು ಕಾಯುವಾಗ, ಪ್ರತಿ ೨೦ ನಿಮಿಷಕ್ಕೊಂದು ದೇಹ ಬರುತ್ತಿತ್ತು. ಜೀವನವಿಲ್ಲಿ ಹೀಗೆ ಅಂತ್ಯವಾಗುತ್ತಿದೆ…ಇದು ಎಲ್ಲರಿಗು ಅನ್ವಯ. ಆಚೆ ನಾವೇಕೆ ನಾನು, ನನ್ನದು ಎಂದು ಹೊಡೆದಾಡುತ್ತಿದೇವೆ? ಏನನ್ನು ಸಾಧಿಸುವುದಕ್ಕೋಸ್ಕರ ಈ ಹಾರಾಟ, ಮದ, ಮತ್ಸರ, ದ್ವೇಷ? ಎಲ್ಲವು ನೀರಸವೆನಿಸಲು ಶುರುವಾಯಿತು. ಇದನ್ನೇ ಸ್ಮಶಾನ ವೈರಾಗ್ಯ ಎನ್ನುತೇವೆಯೇ?
ಎಲ್ಲ ಮುಗಿಸಿ ಹೊರ ಬಂದ ನಂತರ – ಮತ್ತದೇ ನಾನು ನನ್ನದೆಂಬ ಅಹಂಕಾರ!
ಸ್ಮಶಾನ ವೈರಾಗ್ಯ

About Me
ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಇಂಜಿನಿಯರ್. ನನ್ನ ಭಾವನೆಗಳ ಅಭಿವ್ಯಕ್ತಿಯೇ ಈ ಮಾನಸ ತರಂಗ.
Leave a comment